ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿ ಇದರ ರಜತ ಸಂಭ್ರಮದ ಅಂಗವಾಗಿ ಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿ ಇದರ ಆವರಣದಲ್ಲಿ ನಿರ್ಮಿಸಿರುವ ಬಿ.ವಿ ಕಾರಂತ ರಂಗವೇದಿಕೆಯಲ್ಲಿ ಜರಗುತ್ತಿರುವ ರಾಷ್ಟ್ರೀಯ ನಾಟಕೋತ್ಸವ ನವರಂಗೋತ್ಸವದ 5ನೇ ದಿನದ ಸಭಾ ಕಾರ್ಯಕ್ರಮದ ಲ್ಲಿ ಊರಿನ ಹಿರಿಯ ನಾಗರಿಕರಾದ ಕೆರೆದಂಡೆ ವೆಂಕಟೇಶ್ ನಾಯಕ್, ನಿವೃತ್ತ ಪೋಸ್ಟ್ ಮಾಸ್ಟರ್ ಬಾಲಕೃಷ್ಣ ಪೈ, ಪೋಸ್ಟಮ್ಯಾನ್ ಮುದ್ದು ಸುವರ್ಣ ಮತ್ತು ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿ ಯ ಶಿಕ್ಷಕಿ ಅರುಣಾ ಟೀಚರ್‌ರವರನ್ನು ನಾಟ್ಕ ಸಂಚಾಲಕರಾದ ಧರ್ಮಯೋಗಿ ಶ್ರೀ ಮೋಹನ್‌ರವರು ರಂಗ ಗೌರವ ನೀಡಿ ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕೆರೆದಂಡೆ ವೆಂಕಟೇಶ್ ನಾಯಕ್‌ರವರು, ಕಲಾವಿದರ ಕೊರತೆ, ಪ್ರೇಕ್ಷಕರ ಕೊರತೆ ಇದ್ದರೂ ಸಹ ಛಲಬಿಡದ ತ್ರಿವಿಕ್ರಮನಂತೆ ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿತಂಡವನ್ನು ಸ್ಥಾಪಿಸಿ ನಿರಂತರ ರಂಗಚಟುವಟಿಕೆಗಳನ್ನು ಕೈಗೊಂಡು ದೇಶದ ಮೂಲೆ ಮೂಲೆಗಳಿಗೆ ನಾಟಕ ಕಂಪನ್ನು ಪಸರಿಸಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಅತ್ಯತ್ತಮ ಪ್ರಶಸ್ತಿಗಳನ್ನು ಪಡೆದುಕೊಂಡು ಇದೀಗ ರಾಷ್ಟ್ರೀಯ ನಾಟಕೋತ್ಸವವನ್ನು ನಡೆಸುತ್ತಿರುವ ಸಂಚಾಲಕರಾದ ಧರ್ಮಯೋಗಿ ಮೋಹನ್ ಮತ್ತವರ ಮಕ್ಕಳು ರಾಷ್ಟ್ರಮಟ್ಟದಲ್ಲೇ ಶ್ಲಾಘನೀಯರು, ನಮತುಳುವೆರ್ ಮುದ್ರಾಡಿ ತಂಡವು ಯಾವುದೇ ರೀತಿಯ ಎಡರು ತೊಡರು ಟೀಕೆ ಟಿಪ್ಪಣಿಗಳಿಗೆ ಅಂಜದೇ ನಿರಂತರ ರಂಗ ಚಟುವಟಿಕೆಯನ್ನು ನಡೆಸಿ ಮದ್ರಾಡಿಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಅಜರಾಮರವಾಗಿಸಿದ ಹೆಮ್ಮೆಯ ರಂಗತಂಡವಾಗಿದೆ. ಸದಾರಮೆಯಂತಹ ಅತ್ಯತ್ತಮವಾದ ಹಳೇ ನಾಟಕಗಳನ್ನು ಮುದ್ರಾಡಿಯ ಜನರಿಗೆ ನೋಡಲು ಅವಕಾಶ ಮಾಡಿಕೊಟ್ಟ ಈ ತಂಡಕ್ಕೆ ಸದಾ ಯಶಸ್ಸು ದೊರೆಯಲಿ ಎಂದು ಹಾರೈಸಿದರು. ಸನ್ಮಾನಿತರಾದ ಶ್ರೀ ಬಾಲಕೃಷ್ಣ ಪೈ, ಮುದ್ದು ಸುವರ್ಣ ಮತ್ತು ಅರುಣಾ ಟೀಚರ್ ಸಂಸ್ಥೆಗೆ ಶುಭ ಹಾರೈಸಿದರು. ದಾಲ್ಮಿಯ ಥಿಯೇಟರ್ ಮುಂಬಯಿಯ ಖ್ಯಾತ ಕಲಾವಿದರಾದ ಲತೇಶ್ ಪೂಜಾರಿ, ಆರ್ ದೇಶ್‌ಪಾಂಡೆ, ಸಂದೀಪ್ ಚವಾನ, ಭೂಮಿಕಾ ಖಂಢೇಲ್ವಾಲ್ ಉಪಸ್ಥಿತರಿದ್ದರು. ನಾಟ್ಕ ಸಂಚಾಲಕರಾದ ಶ್ರೀ ಧರ್ಮಯೋಗಿ ಮೋಹನ್‌ರವರು ಆರ್ಶೀವದಿಸಿದರು. ಕೊನೆಯಲ್ಲಿ ದಾಲ್ಮಿಯ ಥಿಯೇಟರ್ ಮುಂಬಯಿಯ ಕಲಾವಿದರಿಂದ ಮುಕ್ತಿಧಾವ ಎಂಬ ನಾಟಕ ಪ್ರದರ್ಶನಗೊಂಡಿತು
ನಾಟಕೋತ್ಸವದ ವಿಶೇಷತೆಗಳು : ಪ್ರತೀದಿನ ನಾಟಕೋತ್ಸದಲ್ಲಿ ಭಾಗವಹಿಸಿದ ಪ್ರತೀ ರಂಗತಂಡದ ಎಲ್ಲಾ ಕಲಾವಿದರಿಗೂ, ಬೆಳಕು ಸಂಯೋಜಕರಿಗೂ, ವಸ್ತ್ರವಿನ್ಯಾಸಕಾರರಿಗೂ ಮೇಕಪ್ ಮತ್ತು ರಂಗವಿನ್ಯಾಸಕಾರರಿಗೂ ಶಾಲು ಹೊದೆಸಿ ಫಲಕ ನೀಡಿ ಗೌರವಿಸಲಾಯಿತು
ನಾಟಕೋತ್ಸವದ ವಿಶೇಷತೆಗಳು : ಪ್ರತೀದಿನ ನಾಟಕೋತ್ಸದಲ್ಲಿ ಭಾಗವಹಿಸಿದ ಪ್ರತೀ ರಂಗತಂಡದ ಎಲ್ಲಾ ಕಲಾವಿದರಿಗೂ, ಬೆಳಕು ಸಂಯೋಜಕರಿಗೂ, ವಸ್ತ್ರವಿನ್ಯಾಸಕಾರರಿಗೂ ಮೇಕಪ್ ಮತ್ತು ರಂಗವಿನ್ಯಾಸಕಾರರಿಗೂ ಶಾಲು ಹೊದೆಸಿ ಫಲಕ ನೀಡಿ ಗೌರವಿಸಲಾಯಿತು
No comments:
Post a Comment