‘ಕಾರ್ಕಳ, ಆ.4: ಕರ್ನಾಟಕ ನಾಟಕ ಅಕಾಡಮಿಯ ಸಹಯೋಗದೊಂದಿಗೆ ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆ, ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ರಾಮಕೃಷ್ಣ ಸಭಾಭವನ ದಲ್ಲಿ ಒಂದು ವಾರ ಕಾಲ ಆಯೋಜಿಸಿದ ನಾಟ್ಕಾಸ್’ ನಾಟಕೋತ್ಸವಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ನಗಾರಿ ಬಾರಿಸುವ ಮೂಲಕ ನಾಟಕೋತ್ಸವವನ್ನು ಉದ್ಘಾಟಿಸಿದ ಕಾರ್ಕಳ ಶಾಸ್ತ್ರೀಯ ಸಂಗೀತ ಸಭಾದ ಅಧ್ಯಕ್ಷ ನಿತ್ಯಾನಂದ ಪೈ ಮಾತನಾಡಿ, ಈ ಕಾಲದ ಜನರ ಪ್ರತಿಯೊಂದು ವರ್ತನೆಯೂ ನಾಟಕದಂತೆಯೆ ಭಾಸವಾಗುತ್ತದೆ. ಇಂದಿನವರಿಗೆ ನಾಟಕದಲ್ಲಿ ಆಸಕ್ತಿ ಕಡಿಮೆಯಾಗಲು ಇದೂ ಒಂದು ಕಾರಣವಿರಬಹುದೆಂದು ಅಭಿಪ್ರಾಯಪಟ್ಟರು.
‘‘ಕಾಲೇಜಿನ ಪ್ರಾಧ್ಯಾಪಕ ಡಾ.ಜಯಪ್ರಾಕಾಶ್ ಮಾವಿನಕುಳಿ ಕಾರ್ಯಕ್ರಮ ನಿರ್ವಹಿಸಿದರು. ನಾಟಕೋತ್ಸವದ ಮೊದಲ ದಿನದಂದು ಬೆಂಗಳೂರಿನ ಅನಾವರಣ ತಂಡ, ಡಾ.ರಾಜಪ್ಪದಳವಾಯಿ ವಿರಚಿತ ಒಂದು ಬೊಗಸೆ ನೀರು’ ಎಂಬ ಸಾಮಾಜಿಕ ನಾಟಕ ವನ್ನು ಹು.ದಾ.ಮುತ್ತುರಾಜರ ನಿರ್ದೇಶನದಲ್ಲಿ ಪ್ರದರ್ಶಿಸಿದರು. ನಾಟಕೋತ್ಸವದ ಎರಡನೆಯ ದಿನ ಉಡುಪಿಯರಥಬೀದಿ ಗೆಳೆಯರು ಸಾದತ್ ಹುಸೇನ್ ಮಾಂಟೋನ ಮಿಷ್ಟೇಕ್’ ನಾಟಕವನ್ನು ಶ್ರೀಪಾದ್ ಭಟ್‌ರ ನಿರ್ದೇಶನದಲ್ಲಿ ಪ್ರದರ್ಶಿಸಿತು.

No comments:
Post a Comment